Wednesday, December 26, 2012

ನಿಂಬೆ ಹಣ್ಣಿನ ಸಾರು



ಸಾಮಗ್ರಿಗಳು

ನಿಂಬೆ ಹಣ್ಣು - ಎರಡು,ನೀರು  - ಅರ್ಧ ಲೀಟರ್, ಬೆಲ್ಲ - ದೊಡ್ಡ ನಿಂಬೆ ಹಣ್ಣಿನ ಗಾತ್ರದ್ದು (ಬೇಕಾದಲ್ಲಿ ಜಾಸ್ತಿ), ಕೆಂಪು ಮೆಣಸು - ಎರಡರಿಂದ ಮೂರು, ಅರಶಿನ ಪುಡಿ - ಒಂದು ಚಮಚ, ಕೆಂಪು ಮೆಣಸಿನ ಪುಡಿ - ಎರಡು ಚಮಚ, ಉಪ್ಪು - ರುಚಿಗೆ ತಕ್ಕಷ್ಟು, ತುಪ್ಪ - ಎರಡು ಚಮಚ, ಸಾಸಿವೆ - ಒಗ್ಗರಣೆಗೆ ತಕ್ಕಷ್ಟು, ಕರಿ ಬೇವಿನ ಎಲೆ - ಐದಾರು ಎಲೆಗಳು


ಮಾಡುವ ವಿಧಾನ

ಅರ್ಧ ಲೀಟರ್ ನೀರನ್ನು ಒಂದು ಪಾತ್ರೆಯಲ್ಲಿ ಕುದಿಯಲು ಇಡಬೇಕು. ಅದಕ್ಕೆ ಕೆಂಪು ಮೆಣಸಿನ ಪುಡಿ, ಅರಶಿನ ಪುಡಿ, ಬೆಲ್ಲ, ಉಪ್ಪು ಹಾಗೂ ನಿಂಬೆ ಹಣ್ಣಿನ ರಸವನ್ನು ಸೇರಿಸಿ ಚೆನ್ನಾಗಿ ಕುದಿಸಬೇಕು. ಕುದಿದ ಮೇಲೆ, ಒಗ್ಗರಣೆ ಸೌಟಿನಲ್ಲಿ ತುಪ್ಪ ಹಾಕಿ ಅದಕ್ಕೆ ಸಾಸಿವೆ, ಕೆಂಪು ಮೆಣಸು ಹಾಕಿ, ಸಾಸಿವೆ ಚಿಟ ಪಟ ಸದ್ದು ಮಾಡುವಾಗ ಕರಿಬೇವಿನ ಎಲೆಗಳನ್ನೂ ಸೇರಿಸಿ ಕುದಿದಿರುವ ಸಾರಿಗೆ ಹಾಕಿದರಾಯಿತು. ಬಿಸಿ ಅನ್ನಕ್ಕೆ ತುಪ್ಪ ಹಾಕಿ ತಿನ್ನಲು ರುಚಿ.

1 comment:

  1. ತಿಂಡಿಪೋತDecember 26, 2012 at 9:34 AM

    ನೀರು ದೋಸೆ ಬೆನ್ನಿಗೆ ನೀರು ಸಾರಾದರೂ ಬಂತಲ್ಲಾ! ಅರ್ಧಲೀಟರ್ ನೀರಿಗೆ ಸಾಹಿತ್ಯದಲ್ಲಿ ಎರಡು ನಿಂಬೆಹಣ್ಣು, ಚಿತ್ರದಲ್ಲಿ ಮತ್ತು ನಿರೂಪಣೆಯಲ್ಲಿ ಒಂದೊಂದೇ ನಿಂಬೆ ಹಣ್ಣು ಬಂದಿದೆ. ಅಂದರೆ ಅವು ಗಜನಿಂಬೆ ಇರಬಹುದಾ? ಇದರಲ್ಲಿ ವಗ್ಗರಣೆ ಬಿಟ್ಟು ಉಳಿದವೆಲ್ಲಕ್ಕು ಕುದಿಯುವ ಆವಶ್ಯಕತೆ ಬಿಟ್ಟು (ಕೆಟ್ಟುಹೋಗುವಂತದ್ದು ಏನೂ ಇಲ್ವಲ್ಲಾ) ಕೇವಲ ಕಲಕಿದರೆ ಸಾಲದೇ? ತಂಬುಳಿ, ಚಟ್ನಿಗಳಂತೆ ತಣ್ಣನೆ ಸಾರು ರುಚಿಸದೇ?

    ReplyDelete